Make a Difference

Let’s help them together


The sick, old aged and bedridden people never afraid of death but the challenge and bias before them are, how to spend days till the days of their last breath. Depending on the family members for their each routine made them feel miserable. Western lifestyle, Nuclear family system, Modernization, Mechanical life and the unlimited use of social media has acquired the all classes of the society. Amidst these facilities the old age people have become a burden to the family members. This is not only the problem of poor or middle class family; the elderly people of even rich family are also facing such unbearable condition.


So to extend helping hands and to bring all such neglected or problem facing elderly people under a single shelter this The Janakirama Old age Home has taken its birth. The elderly people who are totally bedridden and cannot perform even their daily routine, whose family members can not treat their wounded or unhealthy body, are given opportunity to join our old age home.


To introduce in brief, this The Janakirama Old Age Home has officially got registered under No: DRUK/SOR/132/2018-2019 in District Registrar office. The founder as well as the Chair Person of this trust Smt. Asha Vasant Naik is a well-known, service minded, 28 years of well experienced nurse. For last five years she is giving home service to the bedridden and elderly people of Kumta surrounded area with great love and care. Recognising her unselfish and kind service many organisations have honored her in different platforms. Her dream comes true when she was able to setup an Old Age Home in Kumta with the support, suggestion and co-operation of well wishers and likeminded. She wants this dream home to be well developed, to support all those bedridden and elderly people of all religions who are seeking for their peaceful last moments of life.


This trust has been setup with big ambition and with good aim but not with large capital. We have provided possible needs to them but many more needs are there. So we feel nothing wrong in expecting financial and other kinds of supports from the generous people and organisations in this holy service.


To strengthen the noble cause please extend your helping hand: You can send Bank Cheques or Demand drafts in the name of “JANAKIRAMA VRADDHASHRAYA KUMTA”. Or transfer money directly to our Syndicate Bank Account College Branch, Account No:03542010000170, IFSC: SYNB0000354


It is our humble request to the kind and generous donors to give a casual visit to our Divine Service Centre to guide us.

Make a Difference

ಜಾನಕಿರಾಮಾ ವೃದ್ಧಾಶ್ರಯ


ಮುಪ್ಪು ಆವರಿಸಿ ಹಲವು ರೋಗಗಳಿಂದ ಬಳಲುತ್ತಿರುವವರಿಗೆ ಸಾವಿನ ಅಂಜಿಕೆ ಇರುವುದಿಲ್ಲ ಸಾಯುವವರೆಗೂ ಬದುಕುವುದು ಹೇಗೆ ಎಂಬ ಭಯ ಮಾತ್ರ ಅವರನ್ನು ಕ್ಷಣ ಕ್ಷಣಕ್ಕೂ ಕಾಡದೇ ಬಿಡುವುದಿಲ್ಲ. ದೈನಂದಿನ ಪ್ರತಿಯೊಂದು ಕೆಲಸಕ್ಕೂ ಮನೆಯವರನ್ನೇ ಅವಲಂಬಿಸಬೇಕಾದ ಪರಿಸ್ಥಿತಿಯಲ್ಲಿ ಹಿರಿಯ ಜೀವಿಗಳ ಬದುಕು ತುಂಬಾ ಅತಂತ್ರವಾಗುತ್ತಿದೆ. ಪಾಶ್ಚಾತ್ಯ ಜೀವನಶೈಲಿಗಳು, ಆಧುನಿಕತೆ, ಕುಟುಂಬ ವಿಘಟನೆ, ಯಾಂತ್ರೀಕೃತ ಜೀವನ ಮತ್ತು ಅತಿಯಾದ ಸಾಮಾಜಿಕ ಜಾಲತಾಣದ ಅವಲಂಬನೆ ಎಲ್ಲಾ ವರ್ಗದ ಜನರನ್ನು ಆಕ್ರಮಿಸಿ, ಮನೆಯಲ್ಲಿರುವ ಅನಾರೋಗ್ಯಪೀಡಿತ ಹಿರಿಯ ಜೀವಗಳಿಗೆ ಆರೈಕೆ ಮಾಡುವುದು ಜಟಿಲ ಸಮಸ್ಯೆಯಾಗಿ ಪರಿಣಮಿಸಿದೆ. ಆರ್ಥಿಕವಾಗಿ ಸಬಲರಾಗಿರುವ ಮನೆಗಳಲ್ಲಿಯೂ ಕೂಡ ಮುಪ್ಪಡಗಿದವರ ಜೀವನ ದುಸ್ಥರವಾಗಿದೆ, ವಯೋಸಹಜ ಅಥವಾ ಇನ್ನಿತರ ಅಪಘಾತಗಳಿಂದ ಹಾಸಿಗೆಹಿಡಿದ ರೋಗಿಗಳನ್ನು ಮನೆಯಲ್ಲೇ ಉಪಚರಿಸುವುದು ಅಸಾಧ್ಯವಾದಂತಹ ಪರಿಸ್ಥಿತಿಯಲ್ಲಿ ಇಂತಹ ಮನೆಯ ನಿಸ್ಸಹಾಯಕ ಮಕ್ಕಳು ಮತ್ತು ಮೊಮ್ಮಕ್ಕಳ ನೆರವಿಗಾಗಿ ವಯೋವೃದ್ಧರು ಮತ್ತು ಓಡಾಡಲು ಆಗದೆ ದೈನಂದಿನ ಎಲ್ಲಾ ಕ್ರಿಯೆಗಳನ್ನು ಹಾಸಿಗೆಯಲ್ಲೇ ಮಾಡಬೇಕಾದ ಪರಿಸ್ಥಿತಿಯಲ್ಲಿರುವವರನ್ನು ಒಂದೇ ಸೂರಿನಡಿ ಕರೆತಂದು ಆರೈಕೆ ಮಾಡಬೇಕೆಂಬ ಮೂಲಉದ್ದೇಶದೊಂದಿಗೆ ಹುಟ್ಟಿಕೊಂಡ ಸಂಸ್ಥೆಯೇ “ಜಾನಕಿರಾಮ ವೃದ್ಧಾಶ್ರಯ”.


ಈ ಸಂಸ್ಥೆಯ ಬಗ್ಗೆ ಹೇಳುವುದಾದರೆ ಇದು ಮಾನ್ಯ ಜಿಲ್ಲಾ ಉಪನೊಂದಣಾಧಿಕಾರಿಗಳ ಕಛೇರಿಯಲ್ಲಿ ನೊಂದಾಯಿತವಾಗಿದ್ದು ನೊಂದಣಿ ಸಂಖ್ಯೆ: DRUK/SOR/132/2018-2019 ಮತ್ತು ಸಂಸ್ಥೆಯ ಸ್ಥಾಪಕರು ಮತ್ತು ಅಧ್ಯಕ್ಷರೂ ಆದ “ಶ್ರೀಮತಿ ಆಶಾ ವಸಂತ ನಾಯ್ಕ” ಇವರು ಕುಮಟಾ ತಾಲೂಕಿನಲ್ಲಿ ಚಿರಪರಿಚಿತರು. 28 ವರ್ಷಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿ ಕೆಲಸ ಮಾಡಿದ ಅನುಭವವನ್ನು ಅಸಹಾಯಕರ ಸೇವೆಗೆ ಹೇಗೆ ಬಳಕೆ ಮಾಡಿಕೊಳ್ಳಬಹುದು ಎನ್ನುವುದನ್ನು ಕಂಡುಕೊಂಡಿದ್ದಾರೆ. ಇವರು ಕಳೆದ ಐದು ವರ್ಷಗಳಿಂದ ಕುಮಟಾ ಸುತ್ತಲಿನ ವಯೋವೃದ್ಧರು ಮತ್ತು ಹಾಸಿಗೆಹಿಡಿದ ರೋಗಿಗಳನ್ನು ಅವರವರ ಮನೆಗಳಿಗೆ ಹೋಗಿ ಪ್ರೀತಿ ಮತ್ತು ಕಾಳಜಿಯಿಂದ ಸೇವೆಮಾಡುತ್ತಿದ್ದಾರೆ. ತಮ್ಮ ಸೇವೆಗೆ ಹಲವು ಸಭೆ ಸಮಾರಂಭಗಳಲ್ಲಿ ಸನ್ಮಾನ ಸ್ವೀಕರಿಸಿದ್ದಾರೆ, ಹಾಗೆ ಸನ್ಮಾನ ಸ್ವೀಕರಿಸಿದಾಗಲೆಲ್ಲ “ಒಂದು ಪುಟ್ಟ ವೃದ್ಧಾಶ್ರಮ ನನ್ನ ಕನಸು” ಎಂಬ ಅನಿಸಿಕೆಯನ್ನು ತೋಡಿಕೊಳ್ಳುತ್ತಿದ್ದರು. ಹೀಗೆ ಹಲವು ಆತ್ಮೀಯರ ಹಾರೈಕೆ ಮತ್ತು ನಿರ್ಧೇಶನದಲ್ಲಿ ಸಮಾನಮನಸ್ಕರೊಡಗೂಡಿ ಸ್ಥಾಪಿತವಾದ ಅವರ ಕನಸಿನ ಕೂಸೆ ಈ “ಜಾನಕಿರಾಮ ವೃದ್ಧಾಶ್ರಯ.” ಇದು ಮುಂದೆ ಹೆಮ್ಮರವಾಗಿ ಬೆಳೆದು ಹಲವು ವೃದ್ಧಜೀವಗಳಿಗೆ ನೆಮ್ಮದಿಯ ಬದುಕನ್ನು ನೀಡಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಸಾರ್ವಜನಿಕರಿಂದ ಮತ್ತು ಸಂಘಸಂಸ್ಥೆಗಳಿಂದ ತನು ಮನ ಧನ ಸಹಾಯ ಅಪೇಕ್ಷಿಸುತ್ತಿದ್ದೇವೆ.


ಈ ವೃದ್ಧಾಶ್ರಯದ ಮೂಲಭೂತ ಸೌಕರ್ಯಗಳಿಗಾಗಿ, ಉದಾತ್ತ ಧ್ಯೇಯಕ್ಕಾಗಿ ತನ್ನನ್ನು ಮುಡಿಪಾಗಿಸಿರುವ ಸಂಸ್ಥೆಗೆ ಬೆಂಬಲ ನೀಡಬಯಸುವವರು ದೇಣಿಗೆ ಕೊಡುವುದಾದರೆ ಅಗತ್ಯವಸ್ತುಗಳ ರೂಪದಲ್ಲಿಯೂ, ಚೆಕ್ ಅಥವಾ ಡಿ.ಡಿ ರೂಪದಲ್ಲಿಯೂ “ಜಾನಕಿರಾಮ ವೃದ್ಧಾಶ್ರಯ ಕುಮಟ” ಹೆಸರಿನಲ್ಲಿ ಕಳುಹಿಸಬಹುದು. ಮತ್ತು ನಮ್ಮ ಬ್ಯಾಂಕ್ ಖಾತೆಗೂ ನೇರವಾಗಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯ ವಿವರ: Account No:03542010000170, IFSC: SYNB0000354


ದಯವಿಟ್ಟು ದಾನಿಗಳು ಒಮ್ಮೆ ನಮ್ಮ ಸಂಸ್ಥೆಗೆ ಸಂದರ್ಶಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಅಪೇಕ್ಷಿಸುವ ಸಮಸ್ತ ಆಡಳಿತ ಮಂಡಳಿ ಜಾನಕಿರಾಮ ವೃದ್ಧಾಶ್ರಯ, ಕುಮಟ.

  Our Team

Asha V Naik

Abhishek Diwakar

Sampreet Bhandari

Sanath Bhandari

Vikram Purohit